ನಿಯಮ 46: ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಗಳು ನೋಂದಾಯಿತ ಫಲಾನುಭವಿ ಮತ್ತು ಅವನ ಅವಲಂಭಿತರು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರ ಷಡ್ಯೂಲ್-1 ರಲ್ಲಿ ನಮೂದಿಸಿರುವ ಅಥವಾ ರಾಜ್ಯ ಸರ್ಕಾರದ ಯಾವುದೇ ವಿಮೆ ಯೋಜನೆ ಅಡಿಯಲ್ಲಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ದಾಖಲಾದಾಗ ವೈದ್ಯಕೀಯ ಸಹಾಯಧನವನ್ನು ನೀಡಬೇಕಾಗುತ್ತದೆ. ಕನಿಷ್ಠ 48 ಗಂಟೆಗಳವರೆಗೆ ಸತತವಾಗಿ ಆಸ್ಪತ್ರೆಯಲ್ಲಿ ದಾಖಲಾದಾಗ ರೂ.300/- ಮತ್ತು ಪ್ರತಿ ದಿನ 300 ರೂ ಅಂತೆ ಗರಿಷ್ಠ ರೂ.10,000/- ಮಿತಿಗೆ ಒಳಪಟ್ಟು ಮಂಜೂರು ಮಾಡಬೇಕಾಗುತ್ತದೆ. ನೋಂದಾಯಿತ ನಿರ್ಮಾಣ ಕಾರ್ಮಿಕ ಅರ್ಜಿ ನಮೂನೆ XX ರೊಂದಿಗೆ ನಮೂನೆ XXII-A ನಲ್ಲಿ ವೈದ್ಯಕೀಯ ಪ್ರಮಾಣಪತ್ರ ಹಾಗು ಸೂಚಿಸಲಾದ ಇತರೆ ದಾಖಲೆಗಳನ್ನು ಸಲ್ಲಿಸಬೇಕು.