ನಿಯಮ 49- D ನೋಂದಾಯಿತ ನಿರ್ಮಾಣ ಕಾರ್ಮಿಕನಿಗೆ ದ್ರವರೂಪದ ಪೆಟ್ರೋಲಿಯಂ ಅನಿಲ (ಎಲ್.ಪಿ.ಜಿ) ಸಂಪರ್ಕಗೊಳಿಸುವ ಸಹಾಯ (ಕಾರ್ಮಿಕ ಅನಿಲ ಭಾಗ್ಯ) .

  1. ಈ ನಿಯಮದಲ್ಲಿ ಸೂಚಿಸಿರುವಂತೆ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ನೋಂದಾಯಿತ ನಿರ್ಮಾಣ ಕಾರ್ಮಿಕನು ಅವನ ಕುಟುಂಬಕ್ಕೆ ಎರಡು ಬರ್ನರ್ ಸ್ಟೌವ್ ಮತ್ತು ಮೂರು ತಿಂಗಳಿಗೊಮ್ಮೆ ಗ್ಯಾಸ್ ತುಂಬಿಸುವುದರೊಂದಿಗೆ ದ್ರವರೂಪದ ಪೆಟ್ರೋಲಿಯಂ ಅನಿಲ (ಎಲ್.ಪಿ.ಜಿ) ಸಂಪರ್ಕ ಪಡೆಯಲು ಅರ್ಹತೆ ಪಡೆದಿರುತ್ತಾನೆ.
  2. ಒಂದು ವೇಳೆ, ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಜನ ನೋಂದಾಯಿತ ನಿರ್ಮಾಣ ಕಾರ್ಮಿಕರು ಇದ್ದರೆ ಅವರಲ್ಲಿ ಒಬ್ಬರು ಮಾತ್ರ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.
  3. ನೋಂದಾಯಿತ ನಿರ್ಮಾಣ ಕಾರ್ಮಿಕ ಯಾವುದೇ ಬಾಕಿ ಇಲ್ಲದಂತೆ ಪೂರ್ಣವಾಗಿ ವಂತಿಗೆಯನ್ನು ಮಂಡಳಿಗೆ ಪಾವತಿಸಿರಬೇಕು.
  4. ಈ ಸೌಲಭ್ಯವನ್ನು ಪಡೆಯಲು ನಮೂನೆ XXIII-A ಅರ್ಜಿಯೊಂದಿಗೆ ಫಲಾನುಭವಿಯ ಪಡಿತರ ಚೀಟಿ ಅಥವಾ ಚುನಾವಣೆ ಆಯೋಗದವರು ನೀಡಿರುವ ಗುರುತಿನ ಚೀಟಿ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಪಡಿತರ ಚೀಟಿ ಪ್ರತಿ ಮತ್ತು ಫಲಾನುಭವಿ ಹೆಸರಿನಲ್ಲಾಗಲಿ ಅವನ ಕುಟುಂಬದ ಅವಲಂಭಿತರ ಹೆಸರಿನಲ್ಲಾಗಲಿ ಯಾವುದೇ ರೀತಿಯ ರಿಯಾಯತಿ ಎಲ್.ಪಿ.ಜಿ ಸಂಪರ್ಕವನ್ನು ಪಡೆದಿರುವುದಿಲ್ಲವೆಂದು ನೋಟ್ರಿ ಮುಂದೆ ಸಹಿ ಮಾಡಿದ ಅಫೀಡೆವಿಟ್ ಅಥವಾ ಸಂಬಂಧಿಸಿದ ಆಹಾರ ನಿರೀಕ್ಷಕರಿಂದ ದೃಢೀಕರಣ ಪತ್ರವನ್ನು ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಗೆ ಸಲ್ಲಿಸಬೇಕು.
  5. ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಅಧಿಕೃತ ಅಧಿಕಾರಿಯು ಸ್ವೀಕರಿಸಿದ ಅರ್ಜಿ ಮತ್ತು ದಾಖಲೆಗಳು ನಿಯಮಾನುಸಾರ ಸತ್ಯಾಂಶವನ್ನು ಪರೀಕ್ಷಿಸಿ ಸರಿಯಿದೆ ಎಂದು ಮನವರಿಕೆಯಾದರೆ ಫಲಾನುಭವಿಗೆ ಈ ಸೌಲಭ್ಯವನ್ನು ಮಂಜೂರು ಮಾಡಲಾಗುವುದು. ಈ ಸೌಲಭ್ಯವನ್ನು ಸಂಬಂಧಿಸಿದ ಇಲಾಖೆಯ ಮೂಲಕ ಅಥವಾ ನೇರವಾಗಿ ಎಲ್.ಪಿ.ಜಿ ಮತ್ತು ಟ್ಯೂಬ್ ಎರಡು ಬರ್ನರ್ ಸ್ಟೌವ್ ಒದಗಿಸುವವರಿಂದ ಪಡೆಯಬಹುದು.
  6. ಅರ್ಜಿದಾರನು ಈ ಸೌಲಭ್ಯವನ್ನು ಪಡೆಯಲು ಅರ್ಹನಿಲ್ಲವೆಂದು ಕಂಡು ಬಂದರೆ ಅರ್ಜಿದಾರರಿಗೆ ಸಾಕಷ್ಟು ಕಾಲವಕಾಶವನ್ನು ನೀಡಿ ಅರ್ಜಿಯನ್ನು ತಿರಸ್ಕರಿಸಬೇಕು. ಆದರೆ ಅರ್ಜಿದಾರನಿಗೆ ಪರಿಪೂರ್ಣವಾದ ಮಾಹಿತಿಯನ್ನು ಒದಗಿಸಲು ಸಾಕಷ್ಟು ಅವಕಾಶಗಳನ್ನು ಒದಗಿಸಿ ನಂತರ ನಿಯಮಾನುಸಾರ ತಿರಸ್ಕರಿಸಬೇಕು.