1 / 3
2 / 3
2 / 3
2 / 3
2 / 3

ನಮ್ಮ ಬಗ್ಗೆ

ಭಾರತ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗ ಮತ್ತು ಸೇವಾ ಪರಿಸ್ಥಿತಿಗಳನ್ನು ನಿಯಂತ್ರಿಸಲು ಮತ್ತು ಅವರ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ ಯೋಜನೆಗಳನ್ನು ಒದಗಿಸಲು ಸಲುವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996, ಅನ್ನು ಜಾರಿಗೆ ತಂದಿರುತ್ತದೆ. ಕರ್ನಾಟಕ ಸರ್ಕಾರವು 01-11-2006 ರಿಂದ ಜಾರಿಗೆ ಬರುವಂತೆ ನಿಯಮಗಳನ್ನು ಜಾರಿಗೊಳಿಸಿ, ದಿನಾಂಕ:18-01-2007 ರಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚನೆ ಮಾಡಿದೆ.

ಭಾರತ ಸರ್ಕಾರವು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಚನೆಯಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳಿಗೆ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಲು ಸಲುವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಒಟ್ಟು ವೆಚ್ಚದ ಮೇಲೆ ಸುಂಕವನ್ನು ವಿಧಿಸಲು ಮತ್ತು ಸಂಗ್ರಹಿಸಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996ರ ನ್ನು ಜಾರಿಗೊಳಿಸಿ, ಸದರಿ ಕಾಯ್ದೆಯ ಕಲಂ 14(1) ರಡಿ ಕೇಂದ್ರ ಸುಂಕ ನಿಯಮಗಳು 1998 ಅನ್ನು ರೂಪಿಸಿರುತ್ತದೆ.

ಮಂಡಳಿಯ ಸದಸ್ಯರು

 • ಅಧಿಕಾರಿ ಸದಸ್ಯರು
 • ಮಾನ್ಯ ಕಾರ್ಮಿಕ ಸಚಿವರು ಮತ್ತು ಮಂಡಳಿ ಅಧ್ಯಕ್ಷರು.
 • ಸರ್ಕಾರದ ಕಾರ್ಯದರ್ಶಿಗಳು , ಕಾರ್ಮಿಕ ಇಲಾಖೆ, ವಿಕಾಸಸೌಧ, ಬೆಂಗಳೂರು-ಸದಸ್ಯರು .
 • ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಅಥವಾ ಇವರ ನಾಮ ನಿರ್ದೇಶಿತರು, ವಿಕಾಸಸೌಧ, ಬೆಂಗಳೂರು-೫೬೦ ೦೦೧-ಸದಸ್ಯರು.
 • ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ ಅಥವಾ ಇವರ ನಾಮ ನಿರ್ದೇಶಿತರು, ವಿಕಾಸಸೌಧ, ಬೆಂಗಳೂರು-೫೬೦ ೦೦೧-ಸದಸ್ಯರು .
 • ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಥವಾ ಇವರ ನಾಮ ನಿರ್ದೇಶಿತರು, ವಿಕಾಸಸೌಧ, ಬೆಂಗಳೂರು-೫೬೦ ೦೦೧-ಸದಸ್ಯರು.
 • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಪ್ರತಿನಿಧಿ ಸದಸ್ಯರು
 • ಶ್ರೀ. ವೆಂಕಟೇಶ್, ಡೆಪ್ಯೂಟಿ ಜನರಲ್ ಸೆಕ್ರೆಟರಿ, ಕರ್ನಾಟಕ ರಾಜ್ಯ ಐಎನ್‍ಟಿಯುಸಿ ಶಾಖೆ, ಬೆಂಗಳೂರು-ಸದಸ್ಯರು.
 • ಶ್ರೀ. ಎಸ್.ಎಸ್. ಪ್ರಕಾಸಂ, ಅಧ್ಯಕ್ಷರು, ಕರ್ನಾಟಕ ಕನ್ಸ್ಟ್ರಕ್ಷನ್ ವೆಲ್‍ಫೇರ್ ಬೋರ್ಡ, ಬೆಂಗಳೂರು-ಸದಸ್ಯರು.
 • ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್, ಬೆಂಗಳೂರು. ಇವರ ಪ್ರತಿನಿಧಿ (ಕಲಬುರಗಿ ವಿಭಾಗದಿಂದ)- ಸದಸ್ಯರು.
 • ಡಾ: ಮಮತ ಸಿ.ಎಸ್ W/o ಮಾಧವ್ ಆರ್, ಶಿರುಗುಪ್ಪಿ, ನಂ. 22. 1ನೇ ಮಹಡಿ, 1ನೇ ಹಂತ, 2ನೇ ಮುಖ್ಯರಸ್ತೆ, ಮಂಜುನಾಥ ನಗರ, ಕಾರ್ಡ್‍ರಸ್ತೆ, ಬೆಂಗಳೂರು-560010-ಸದಸ್ಯರು.
 • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಾಲೀಕರ ಪ್ರತಿನಿಧಿ ಸದಸ್ಯರು
 • ಅಧ್ಯಕ್ಷರು, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ, ಬೆಂಗಳೂರು-ಸದಸ್ಯರು.
 • ಅಧ್ಯಕ್ಷರು, ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್, ಕರ್ನಾಟಕ, ಬೆಂಗಳೂರು-ಸದಸ್ಯರು.
 • ಶ್ರೀ ವಿಜಯಕುಮಾರ್ ಪಾಟೀಲ್, ನಂ.136, ಸೆಕ್ಟರ್ ನಂ-2, ಶಿವಬಸವ ನಗರ, ಬೆಳಗಾವಿ-೫೯೦ ೦೧೦-ಸದಸ್ಯರು
 • ಶ್ರೀ ಶ್ರೀನಿವಾಸನ್ ಎಸ್, ನಾರಪ್ಪ S/o ಎಸ್. ನಾರಪ್ಪ, ನಿರ್ದೇಶಕರು, ಎಸ್‍ಕೆಎವಿ, ಡೆವೆಲಪರ್ಸ್ ಪ್ರೈವೆಟ್ ಲಿಮಿಟೆಡ್, ನಂ.48, ಲ್ಯಾವೆಲ್ಲೆ ರಸ್ತೆ, ಬೆಂಗಳೂರು-ಸದಸ್ಯರು.

ಸಂಘಟನೆ ಚಿತ್ರಣ

chart

ಯೋಜನೆಗಳು

 • ವೈದ್ಯಕೀಯ ಸಹಾಯ ಧನ (ಕಾರ್ಮಿಕ ಆರೋಗ್ಯ ಭಾಗ್ಯ)

  ನಿಯಮ 46: ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಗಳು ನೋಂದಾಯಿತ ಫಲಾನುಭವಿ..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
 • ಶ್ರಮ ಸಾಮರ್ಥ್ಯ ಉಪಕರಣ ಪೆಟ್ಟಿಗೆ ಮತ್ತು ತರಬೇತಿ ಯೋಜನೆ

  ನಿಯಮ 41: ಮಂಡಳಿಯ ಫಲಾನುಭವಿಯೆಂದು ನೋಂದಾಯಿತನಾದ ನಿರ್ಮಾಣ ಕಾರ್ಮಿಕನು 20 ಸಾವಿರ ರೂ ಮೀರದ ಉಪಕರಣ ಪೆಟ್ಟಿಗೆ..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
 • ತಾಯಿ ಮಗು ಸಹಾಯ ಹಸ್ತ

  ನಿಯಮ 43- A ನೋಂದಾಯಿತ ಮಹಿಳಾ ಕಾರ್ಮಿಕಳ ಮಗುವಿನ ಪೌಷ್ಠಿಕಾಂಶದ ಪೂರೈಕೆಗಾಗಿ ಹಾಗು ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ನೀಡುವ..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
 • ಅಪಘಾತ ಪರಿಹಾರ

  ನಿಯಮ 47: ಅಪಘಾತ ಪರಿಹಾರ, ಅಪಘಾತ ಎಂದರೆ ಯಾವುದೇ ಅಪರಾಧ ಉದ್ದೇಶವಿಲ್ಲದೆ ಮತ್ತು ಅನಿರೀಕ್ಷಿತವಾಗಿ ನಡೆಯುವ ಘಟನೆಯಾಗಿದ್ದು..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
 • ಪ್ರಮುಖ ವೈಧ್ಯಕೀಯ ವೆಚ್ಚ ಸಹಾಯ ಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ)

  ನಿಯಮ 48 : ನೋಂದಾಯಿತ ನಿರ್ಮಾಣ ಕಾರ್ಮಿಕನ ಹಾಗು ಅವನ / ಅವಳ ಅವಲಂಭಿತರ ಪ್ರಮುಖ ಖಾಯಿಲೆಗಳ ವೆಚ್ಚಕ್ಕಾಗಿ..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
  ಅಂತ್ಯಕ್ರಿಯೆ ವೆಚ್ಚ

  ನಿಯಮ 44 - ನೋಂದಾಯಿತ ನಿರ್ಮಾಣ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ಹಾಗು ಪರಿಹಾರ ಧನವಾಗಿ (ಅನುಗ್ರಹ ರಾಶಿ)..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
 • ಹಕ್ಕುಸಾಧನಾ ಅರ್ಜಿಗಳನ್ನು ಸಲ್ಲಿಸಲು ಇರುವ ಕಾಲ ಮಿತಿ ಚ

  ಹಕ್ಕುಸಾಧನಾ ಅರ್ಜಿಗಳನ್ನು ಸಲ್ಲಿಸಲು ಕಾಲ ಮಿತಿಯನ್ನು ಸೂಚಿಸಿದೆ..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ